ಗಣ್ಯ ಮಹಿಮರು ಜನಿಸಿದಂತಹ ಪುಣ್ಯ ನೆಲವಿದು ನಮ್ಮದು

ತಾಯಿಯನು ಸ್ಮರಿಸೋಣ* 🙏🙏






ಗಣ್ಯ ಮಹಿಮರು ಜನಿಸಿದಂತಹ 
ಪುಣ್ಯ ನೆಲವಿದು ನಮ್ಮದು
ಅನ್ಯರಾಳ್ವಿಕೆಯಿಂದ ಮುಕ್ತಿ
ಹೊಂದಿದ ನಾಡಿದು 

ಪ್ರಕೃತಿ ದೇವಿಯು ಹಸಿರಿನಿಂದ
ಕಂಗೊಳಿಸುವ ನೆಲೆವೀಡಿದು
ವೀರ ಯೋಧರು ಶೌರ್ಯದಿಂದ
ಮೆರೆದ ಸುಂದರ ಬೀಡಿದು

ವೇಷ ಭೂಷಣಗಳು ಹಲವಾರು 
ಸಂಗೀತ , ನೃತ್ಯ, ಸಾಹಿತ್ಯಗಳ ತವರೂರು
ಕವಿ ಪುಂಗವರು ಜನುಮವಿತ್ತಿಹರಿಲ್ಲಿ
ಋಷಿ ಮುನಿಗಳು ತಪವ ಗೈದಿಹರಿಲ್ಲಿ

ವಿಧ ವಿಧ ಭಾಷೆಗಳ ನುಡಿವ ಜನರ
ಹೊಂದಿರುವ ಸುಂದರ ಭಾರತ
ಹಲವು ಧರ್ಮಗಳ ಜನರು 
ತುಂಬಿ ನಲಿದಿಹ  ಭಾರತ

ರಾಷ್ಟ್ರ ಗೀತೆಯನು ಹಾಡೋಣ
ರಾಷ್ಟ್ರಕೆ ಎಂದೂ ನಮಿಸೋಣ
ತಾಯಿಯ ಎಂದು ಸ್ಮರಿಸೋಣ 
ಜೈ ಹಿಂದ್ ಎನ್ನೋಣ 

✍️✍️ಭಾಗ್ಯಶ್ರೀ ಕೆಕ್ಕಾರ
೧೧/೦೮/೨೦೨೩

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)