ಶಾಂತಿ ಉಪಯೋಗಿಸಿ ಚುಟುಕು
ಶಾಂತಿ,ಸಹನೆ ಮನದಲ್ಲಿರೆ
ನೆಮ್ಮದಿಯದು ಬದುಕಲ್ಲಿರೆ
ಹುಡುಕದಿರು ಎಲ್ಲೆಂದರಲ್ಲಿ
ಸಂತಸದ ಬಾಳು ಖಚಿತವಲ್ಲಿ
ಶಾಂತಿ , ನೆಮ್ಮದಿ ವಸ್ತುಗಳಿಂದ ಸಿಗುವುದಿಲ್ಲ
ತೃಪ್ತಿಯೆನ್ನುವುದು ಮನದಲ್ಲಿರಲೇ ಬೇಕಲ್ಲ
ದೇವನು ನೀಡಿರುವುದರಲಿ ಸಂತಸವಿರಲಿ
ಪ್ರತಿಕ್ಷಣವೂ ಕಾಣದ ದೇವನಿಗೆ ಶರಣಾಗಲಿ🙏🙏
ಕೊಟ್ಟಿಗೆಗೆ ಹೋದರೂ ಶಾಂತಿ
ಮನೆಗೆ ಬಂದರೂ ಶಾಂತಿ
ಬೆಳಗಾದರೆ ಹುಡುಕುವರು ಶಾಂತಿ
ನಮ್ಮೊಳಗೇ ಅಡಗಿದೆ ಮನಸ್ ಶಾಂತಿ
ಅಂಗಡಿಯಲ್ಲಿ ಮಾರಾಟಕ್ಕಿಲ್ಲ
ಹುಡುಕ ಹೋದರೆ ಸಿಗುವುದಿಲ್ಲ
ಧನವ ಕೊಟ್ಟರೂ ದೊರಕುವುದಿಲ್ಲ
ಅದು ನಮ್ಮೊಳಗೇ ಇದೆಯಲ್ಲ
ಅದುವೇ ಮನಸ್ ಶಾಂತಿ
ದೀಪಕ್ ಅಂಕಣ ಹವಿಹಾಸ್ಯ👆👆
ದೀಪ ಚುಟುಕು ಸ್ಪರ್ಧೆ
ನಾವು ನಿಮ್ಮಿಷ್ಟ
ಬದುಕಲಿ ಶಾಂತಿ - ನೆಮ್ಮದಿ ಕರುಣಿಸೆಂದು
ಬಾಳಿನ ಬವಣೆಗಳಲ್ಲವ ನೀಗಿಸೆಂದು
ಮನೆ ಮನೆಯಲಿ ದೀಪವನು ಬೆಳಗಿಸುತಲಿ
ಕರ ಮುಗಿದು ಪಾದಕೆರಗುವೆವು ದೇವನಲಿ🙏🙏
ಭಾಗ್ಯಶ್ರೀ ಕೆಕ್ಕಾರ
ಹಬ್ಬದಲ್ಲಿ ಸಾಲು ಸಾಲು ದೀಪವು
ತನು ಮನಕೆ ಆನಂದದಾ ಕ್ಷಣವು
ಮನದ ನೋವನು ಮರೆತೇ ಬಿಡುವೆವು
ಶಾಂತಿ -ನೆಮ್ಮದಿಯನು ಸದಾ ಬೇಡುವೆವು
ತೈಲವ ಎರೆದು ಬೆಳಗಿಸುವ ದೀಪ
ಮನದಲಿ ಇರಲಿ ಶಾಂತಿಯ ಹಣತೆ
ಹೃದಯದಲಿರಲಿ ಪ್ರೀತಿಯ ಪಣತೆ
ಬೆರೆತು ಬಾಳಲದು ನಂದಾದೀಪ
ಭಾಗ್ಯಶ್ರೀ ಕೆಕ್ಕಾರ
೧೪/೧೧/೨೦೨೩