ಯಮದೀಪ ಅಂದರೇನು
ಆಶ್ವೀಜ ಮಾಸದ ಅಮಾವಾಸ್ಯೆಯಿಂದ ಶುರು ಮಾಡಿ ಒಂದು ತಿಂಗಳ ಪರ್ಯಂತ,,, ದಕ್ಷಿಣ ದಿಕ್ಕಿಗೆ ಮುಖ ಮಾಡಿ ಹಚ್ಚುವ ದೀಪವೇ ಯಮದೀಪ.
ಇದು ಪಿತೃಪಕ್ಷದಲ್ಲಿ ಭೂಮಿಗೆ ಬಂದ ಪಿತೃಗಳು,ತಿರುಗಿ ಹೋಗುವಾಗ,,ಅವರ ಮಾರ್ಗದ ಬೆಳಕಿಗೆ ಹಾಗೂ ಅವರಿಗೆ ಯಮಲೋಕ ಪ್ರಾಪ್ತಿ ತಪ್ಪಿಸಲೋಸುಗ ಹಚ್ಚುವ ದೀಪ.
ಇದನ್ನು ಮೊದಲಿನ ಕಾಲದಲ್ಲಿ ಎಳ್ಳೆಣ್ಣೆ ಬಳಸಿ ಹಣತೆಯಲ್ಲಿ ಹಚ್ಚಿ,,,ಬಣ್ಣದ ಕಾಗದದಿಂದ ತಯಾರಿಸಿದ ಸುಂದರ ಬಿದಿರಿನ ಬುಟ್ಟಿಯಲ್ಲಿಟ್ಟು, ಅಂಗಳದಲ್ಲಿ ತೂಗು ಹಾಕುತ್ತಿದ್ದರು.
ಈಗ ಆಕಾಶ ದೀಪವನ್ನೇ,,ಯಮದೀಪವಾಗಿ ತಿಳಿದು,ಬಹುತೇಕರ ಮನೆಯಲ್ಲಿ ಆಚರಣೆಯಲ್ಲಿದೆ.