ಕೆಲಸ ಚುಟುಕು

ಬದುಕು ಸಾಗಿಸಲು ಬೇಕು ಕೆಲಸ
ಕೆಲಸದಲ್ಲಿರಲಿ ಸದಾ ಸಂತಸ
ಆಗ ಕೆಲಸದಲ್ಲಾಗದು ಆಯಾಸ
ಕೆಲಸವೇ ಬದುಕಾದರೆ ವಿಪರ್ಯಾಸ!

ಬದುಕಿನ ಬಂಡಿ ಸಾಗಿಸಲು ಕೆಲ‌ಸವಿರಬೇಕು
ಆರೋಗ್ಯದ ಕಡೆಗೂ ಗಮನ ವಿರಬೇಕು
ಶ್ರಮದ ದುಡಿಮೆಯಲಿ ರೀತಿ ನೀತಿ ಇರಲಿ
ಬಾಳದು ಸದಾ ಸಂತಸದಲೇ ಸಾಗುತಿರಲಿ

ಮಧುರ ಬಳಸಿ ಚುಟುಕು

ಮಾತದು ಮಧುರವಾಗಿರಲಿ
ಮನಸ ನೋಯಿಸದಂತಿರಲಿ
ಮೃದುವಾಗಿ ಹಿತವೆನಿಸುತಿರಲಿ
ಸಿಹಿಯ ಹೂರಣದಂತಿರಲಿ

ಕಳೆದ ಬಾಲ್ಯದ ನೆನಪುಗಳೇ ಮಧುರ 
ನೆನೆದರೆ ಮನವಾಗುವುದು ಹಗುರ
ಮತ್ತೆಂದೂ ಬಾರದು ,ಸಾಗಿದೆ ಬಲುದೂರ 
ಕಳೆದ ನೆನಪಲೆ ಸಾಗುವುದು ನಮ್ಮೀ ಪರಿವಾರ

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)