ಚೆಲುವೆ ಮತ್ತೆ ಹುಚ್ಚು ಉಪಯೋಗಿಸಿ ಚುಟುಕು ಬರೆದಿದ್ದು
ನಮ್ಮಯ ಬಾಳಿಗೆ ಬೆಳಾಕಾಗಿರುವೆ
ನಿನ್ನಯ ನೆನಪಲಿ ದಿನ ಕಳೆಯುವೆ
ಪ್ರೀತಿಯ ಅಪ್ಪುಗೆಯ ನೀಡಿರುವೆ
ನೀನೆ ನನ್ನ ಹೃದಯ ಗೆದ್ದ ಚೆಲುವೆ
ಅಮ್ಮ ,ನನ್ನಮ್ಮ
🙏🙏🙏🙏🙏
ಮಾತಿನಲಿ ಮೋಡಿ ಮಾಡಿರುವೆ
ಹೃದಯದಲಿ ಸದಾ ನೆಲೆಸಿರುವೆ
ಕೋಪದಲೂ ನಾ ನಿನ್ನ ಪ್ರೀತಿಸುವೆ
ಅವಳೆ ಅಮ್ಮನೆನ್ನುವ ಬಾಳಿನ ಚೆಲುವೆ!
ನಮ್ಮ ಮಗಳು ನಮಗೆ ಚೆಲುವೆ
ಬೇಕಿಲ್ಲ ಅವಳಿಗೆ ಬೇರೆ ಒಡವೆ
ಆಗಾಗ ತೊಡುವ ಚೆಂದದ ಉಡುಗೆ
ಅವಳೆ ನಮ್ಮ ಬಾಳಿಗೆ ದೇವನಿತ್ತ ಕೊಡುಗೆ
ನನಗಿದೆ ಪ್ರತಿದಿನ ತರ ತರವಾದ ಅಡುಗೆ ಮಾಡುವ ಹುಚ್ಚು
ಹಿತ -ಮಿತವಾದ ಹುಳಿ ಉಪ್ಪು ಖಾರಗಳಿದ್ದರೆ ರುಚಿ ಹೆಚ್ಚು
ನಾಲಿಗೆಗೆ ರುಚಿಯಾದರೆ ಎಲ್ಲರೂ ಹೊಗಳುವರು ಹೆಚ್ಚೆಚ್ಚು
ರುಚಿ ಇಲ್ಲದಿದ್ದದರೆ ಹೊಟ್ಟೆಗೆ ಹಚ್ಚಿದಂತೆ ಆಗುವುದು ಕಿಚ್ಚು
ಪ್ರತಿಕ್ಷಣವೂ ಖುಷಿಯಾಗಿರುವ ಹುಚ್ಚು
ಅದಕ್ಕೆ ಕಾರಣಗಳು ಬೇಕಿಲ್ಲ ಹೆಚ್ಚೆಚ್ಚು
ಅದರಲಿ ಅಡಗಿದೆ ಆರೋಗ್ಯದ ಗುಟ್ಟು
ಅದರಿಂದಲೇ ನೀ ಸದಾ ಬದುಕನು ಕಟ್ಟು
ಬಾಳಿನಲಿ ಅವನೆಂದರೆ ನನಗೆ ಹುಚ್ಚು
ಅವನ ಕೆಲಸವೇ ಅವನಿಗೆ ಸದಾ ಹೆಚ್ಚು
ಮಾತು ಮಾತಿಗೆ ಬೈಯುವನು ಹೆಚ್ಚೆಚ್ಚು
ಆದರೂ ನನಗೆ ಅವನೇ ಅಚ್ಚುಮೆಚ್ಚು
೨೫/೧೧/೨೦೨೩