ಬದುಕು ಬಂದಂತೆ ಸಾಗುತಿರು

ದೇಹವೊಂದು  ದೇವಾಲಯವಿದ್ದಂತೆ
ಬಾಳಿನಲಿ ಅಹಮಿಕೆಯು ಸುಳಿಯದಂತೆ 
ಅತಿ ಆಸೆ ,ಮೋಹಗಳು ಹೆಚ್ಚಾಗದಂತೆ
ಬದುಕು ಸಾಗುತಿರಲಿ ಅವನೆಣಿಕೆಯಂತೆ

ದೇವನ ಪಾದಗಳಿಗೆ  ಹೂಗಳ ಅರ್ಪಿಸುವಂತೆ
ಮಾಡುತಿರು ನಿನ್ನಯ ಕಾರ್ಯಗಳ ಮನದಂತೆ
ಕುಂದು ಕೊರತೆಗಳು ಇರುವುದು ಸಹಜವಂತೆ
ಹೊಂದಿಕೊಂಡು ಸಾಗುತಿರು ಬದುಕು ಬಂದಂತೆ

ಮೇಲೊಬ್ಬನಿಹನು ಎಲ್ಲವನು  ನೋಡುತಲಿ
ಎಲ್ಲೆಲ್ಲೂ ಹುಡುಕಿದರೂ ಕಾಣದೆ ನೆರಳಿನಲಿ
ಅವನಾಡಿಸಿದಂತೆ ಆಡುವೆವು ಜಗದ ಜನರು  
ಅವನೆಣಿಕೆಯ ಬಾಳು ಖಚಿತವು ತಿಳಿದಿರು

ಹುಟ್ಟಿದವರಿಗೆಲ್ಲ  ಸಾವಿರುವುದು ಖಚಿತ 
ಮೆಚ್ಚಿಸಲಾಗದು ಯಾರನೂ ಜಗದಿ ನಿರತ 
ಹುಚ್ಚು ಮನವು  ದೇವನನು ಜಪಿಸುತಿರಲಿ
ಸ್ವಚ್ಚವಪ್ಪದು  ಮನಸು ಅವನ ನಾಮದಲಿ 🙏🙏


✍️✍️ಭಾಗ್ಯಶ್ರೀ ಕೆಕ್ಕಾರ
೨೪/೧೧/೨೦೨೩






















Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)