೨೩/೧೨/೨೦೨೩ ಚುಟುಕು
ಹೊಟ್ಟೆ ತುಂಬಿಸಲು ಹೋದವ ಹಿಂತಿರುಗಿಲ್ಲ
ಹಡಗು ತುಂಬಿಸಲು ಹೋದವ ಬಂದಿರುವರು
ಇಬ್ಬರೂ ಜೊತೆ ಜೊತೆಯಾಗಿ ಹೋಗಿರುವರು
ಮಾನವರ ಆಸೆಗಳಿಗೆ ಕೊನೆಯೆಂಬುದೇ ಇಲ್ಲ
ಶ್ರಮದ ದುಡಿಮೆಗೆ ಹೆಸರು ರೈತರು
ಬೆವರು ಸುರಿಸಿ ಸತತ ದುಡಿವರು
ಸತತ ಬೆಳೆ ಬೆಳೆದು ಸಂಭ್ರಮಿಸುವರು
ಎಲ್ಲರ ಹೊಟ್ಟೆಯ ತಂಪಾಗಿರಿಸುವರು
ಹೊಟ್ಟೆ ತುಂಬಿಸಲು ಹೊರಟೆ
ತುಂಬಲೆ ಇಲ್ಲವಲ್ಲ ಹೊಟ್ಟೆ
ಮತ್ತೊಂದಿಷ್ಟು ತಿಂದು ಬಿಟ್ಟೆ
ಮರುದಿನ ಕೆಟ್ಟಿತು ಹೊಟ್ಟೆ
ಹಸಿದ ಹೊಟ್ಟೆಗೆ ಬೇಕು ಅನ್ನ
ಅನ್ನ ಮಾಡಲು ಬೇಕು ಅಕ್ಕಿ
ಅಕ್ಕಿ ಕೊಳ್ಳಲು ಬೇಕು ರೊಕ್ಕ
ಬೆಳೆ ಬೆಳೆಯಲು ಬೇಕು ರೈತ
ಹೊಟ್ಟೆ ಉಪಯೋಗಿಸಿ ಚುಟುಕು ಸ್ಪರ್ಧೆ
ಆಸೆಗಳಿಗೆ ಕೊನೆಯೆಂಬುದಿಲ್ಲ
ಕಡಿವಾಣ ನಾವೇ ಹಾಕಬೇಕಲ್ಲ
ಮರ್ಕಟದಂತಿರುವ ಒಳ ಮನಸು
ಹಿಡಿತದಲಿಟ್ಟರೆ ಮಾತ್ರ ಸೊಗಸು
ಸರಿಯಾದ ಸಮಯಕ್ಕೆ ಮಳೆ ಬರಲಿಲ್ಲ
ಬೆಳೆ ಬೆಳೆವ ರೈತರಿಗೆ ನೆಮ್ಮದಿಯಿಲ್ಲ
ಅಡಿಕೆ ಮರ ನೋಡಿದರೆ ಕೊನೆ ಕಾಣಲಿಲ್ಲ
ರೈತರು ಯೋಚಿಸುತ ಕಂಗಾಲಾದರಲ್ಲ
ಕೊನೆ ಕೊಯ್ಯುವ ಸಮಯ ಬಂತಂತೆ
ಕೊನೆ ಗೌಡನಿಗೆ ಕೈತುಂಬಾ ಕೆಲಸವಂತೆ
ಮರದಲಿ ಕೊನೆಯದು ವಿರಳವಂತೆ
ಆದರೂ ಕೊಯ್ಲು ಮಾಡಲೇ ಬೇಕಂತೆ
ಕೊನೆ ಉಪಯೋಗಿಸಿ ಚುಟುಕು