ಬೇಕು ಎನ್ನುವ ಪದ ಬಳಸಿ ಚುಟುಕು
ಬೇಕು ಎಂದರೆ ಬೇಕು ,ಕಂಡಿದ್ದೆಲ್ಲಾ ಬೇಕು
ಸಾಕು ಎಂದವನು ಬಡವನೆ ಇರಬೇಕು!
ಅರಿತು ಕೊಳ್ಳಬೇಕು ಅದರ ಪ್ರಯೋಜನ
ಇಲ್ಲದಿರೆ ಆಗುವುದದು ನಿಷ್ಪ್ರಯೋಜನ !
ನನ್ನವನ ಬೇಕುಗಳ ಲೀಸ್ಟ್ ದೊಡ್ಡದಿದೆಯಲ್ಲ
ಸಾಕ್ರೀ ವಯಸ್ಸಾಯ್ತು ಎಂದು ನುಡಿದಿಹೆ ನಲ್ಲ
ಕೋಪವದು ಬಂದು ಜೋರಾಗಿ ಕೂಗಾಡಿದರಲ್ಲ
ಬುದ್ದಿ ಯಾವಾಗ ಬರುವುದೋ ಆ ದೇವನೆ ಬಲ್ಲ!
ಬೇಕು ಬೇಕು ಎನ್ನುವುದಕೆ ಬ್ರೇಕ್ ಇಲ್ಲ
ಸಾಕಪ್ಪಾ ಸಾಕು ಎಂದೆನಿಸುವುದೇ ಇಲ್ಲ
ಬೇಕು ಬೇಕೆನ್ನುವ ಆಸೆಗಳ ಹಾರಾಟದಲಿ
ಬಂದು ನಿಂತಿದೆ ಇಂದು ಬರಗಾಲದಲಿ
ಬೇಕು ಬೇಕು ಎನ್ನುವ ನನ್ನ ಮುದ್ದು ನಲ್ಲ
ಕೈ ಕೈಗೆ ತಂದು ಕೊಡುವರು ಯಾರೂ ಇಲ್ಲ
ಹೋಗಿ ಹುಡುಕಿ ಕೊಳ್ಳಿ ಎಂದಿರುವೆನಲ್ಲ
ಮುನಿಸಿನಲಿ ಹುಡುಕಿ ಹೊರಟಿರುವನಲ್ಲ
ಬೇವು ಬೆಲ್ಲ ಉಪಯೋಗಿಸಿ ಚುಟುಕು
ಯುಗಾದಿ ಹಬ್ಬದ ದಿನ ಬೇವು ಬೆಲ್ಲ
ಸಂಕ್ರಾಂತಿ ಹಬ್ಬದ ದಿನ ಎಳ್ಳು ಬೆಲ್ಲ
ನಾಳೆಗಳು ಹೇಗೆಂಬ ಅರಿವಿಲ್ಲ
ದೇವನೊಬ್ಬನೆ ಅದನೆಲ್ಲ ಬಲ್ಲ
ಯುಗಾದಿ ಹಬ್ಬಕೆ ಬೇವು ಬೆಲ್ಲದ ಹೂರಣ
ಬಾಗಿಲಿಗೆ ಕಟ್ಟಲು ಬೇಕು ಮಾವಿನ ತೋರಣ
ಊಟಕೆ ಬೇಕು ಸಿಹಿಯಾದ ಒಬ್ಬಟ್ಟು
ಚಹಾ ಜೊತೆಗೆ ಕುರಂ ಕುರುಂ ನಿಪ್ಪಟ್ಟು