ಕಪ್ ಕೇಕ್ ತಪ್ಪಿಸಿಕೊಂಡ ಕ್ಷಣ
ಕಪ್ ಕೇಕ್ 🐈⬛🐈⬛
ಸೌಮ್ಯಾ ಎಂದಿನಂತೆ ರಾತ್ರಿಯ ಊಟ ಮುಗಿಸಿ, ಪಾತ್ರೆಗಳನ್ನು ತೊಳೆದು ನಿದ್ದೆಗೆ ಜಾರಿದಳು. ಗಾಢವಾದ ನಿದ್ದೆ ಬಂದಿತ್ತು. ಮಧ್ಯರಾತ್ರಿ ಹೊತ್ತಿನಲ್ಲಿ ಯಾರೋ ಕೂಗಿದ ಧ್ವನಿ ಕೇಳಿ ಎಚ್ಚರ ಗೊಂಡಳು.
Cup cake, cup cake ಎನ್ನುವ ಗಟ್ಟಿಯಾದ ಧ್ವನಿ ಕೇಳಿಸುತ್ತಿತ್ತು. ಯಾರೊ ಕರೆಯುತ್ತಿರುವ ಹಾಗೆ ಅನಿಸಿತು, ಜೋರಾದ ನಿದ್ದೆಯಲ್ಲಿದ್ದ ಕಾರಣ ಮತ್ತೆ ಚಾದರ ಎಳೆದುಕೊಂಡು ನಿದ್ದೆಗೆ ಜಾರಿದಳು. ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಮನೆ ಕೆಲಸ ಎಲ್ಲಾ ಮುಗಿಸಿದಳು. ಪ್ರತಿದಿನ ಮೊಬೈಲ್ ನೋಡುವಂತೆ ವಾಟ್ಸಪ್ ನೋಡಿದಳು. ವಾಟ್ಸಪ್ ಒಂದು ಗುಂಪಿನಲ್ಲಿ cup cake ಮಿಸ್ಸಿಂಗ್ ಅಂತ ಇತ್ತು, ಯಾರಾದರೂ ಕಂಡರೆ ಹೇಳಿ ಅಂತ ಫೊಟೋ ಸಹ ಹಾಕಿದ್ದರು. ಸೌಮ್ಯಾಳಿಗೆ ಆಗ ಅರ್ಥವಾಯಿತು. ಆ ದಿನ ಬೆಳಿಗ್ಗೆ ಮಕ್ಕಳೊಡನೆ ಚರ್ಚೆ ಸಹ ಮಾಡಿದ್ದಳು. ರಾತ್ರಿ ಜೋರಾದ ಧ್ವನಿ ಕೇಳ್ತಾ ಇತ್ತು ಅಲ್ವಾ ಅಂತ. ಹೌದು ಅಮ್ಮಾ, ಯಾರದೋ ಮನೆಯ ಬೆಕ್ಕು ಕಾಣೆಯಾಗಿರ ಬೇಕು ಎಂದರು. ದಿನಾಲು ಅದನ್ನು ಪಂಜರದೊಳಗೆ ಇಟ್ಟು ಮುದ್ದಿನಿಂದ ಸಾಕಿದ್ದರು. #ಆ #ಸಂದರ್ಭ # ನನ್ನ ಊಹೆಗೂ ನಿಲುಕದಾಗಿತ್ತು.
ಹಿಂದಿನ ದಿನ ರಾತ್ರಿ ಅದೇ ಬಿಲ್ಡಿಂಗ್ ನಲ್ಲಿ ವಾಸ ಮಾಡುವ ಶೇಖರ ಮತ್ತೆ ಶಾಂತಿಯವರು ಪುಟ್ಟದಾದ ಬೆಕ್ಕನ್ನು ಸಾಕಿದ್ದರು. ಶಾಂತಿಗೆ ಆ ದಿನ ರಾತ್ರಿ ಕೆಲಸದ ನಿಮಿತ್ತ ಬೇರೆ ದೇಶಕ್ಕೆ ಹೋಗಬೇಕಿತ್ತು, ಮುಂಜಾನೆಯ ✈️✈️ ಆದ ಕಾರಣ ರಾತ್ರಿ ಹೊರಟಳು. ಹೊರಡುವ ಸಮಯದಲ್ಲಿ Cup cake ಹೊರಗೆ ಬಂದು ಬಿಟ್ಟಿತ್ತು. ಮತ್ತೆ ಮನೆ ಒಳಗೆ ಬರಬಹುದೆಂದು ಶೇಖರ ಹೆಂಡತಿಯನ್ನು ಕಾರಿನ ಹತ್ತಿರ ಹೋಗಿ ಕಳಿಸಿ ಬಂದ.
Cup cake ಪಾರ್ಕಿಂಗ್ ನಲ್ಲಿ ಇರುವ ಕಾರ್ ಒಳಗೆ ಹೋಗಿ ಬಚ್ಚಿ ಕೊಂಡಿತ್ತು. ಆ ರಾತ್ರಿಯಲ್ಲಿ ಎಷ್ಟೇ ಕರೆದರೂ ಹೊರಗೆ ಬರಲಿಲ್ಲ. ಬೆಳಿಗ್ಗೆ ಪಾರ್ಕಿಂಗ್ ನಲ್ಲಿ ಇರುವ ಕಾರುಗಳಲ್ಲೆಲ್ಲ ಹುಡುಕಿ ಹುಡುಕಿ ಸುಸ್ತಾಗಿ, ರಾತ್ರಿಯೂ ನಿದ್ದೆಯಿಲ್ಲ ಎಂದು ಬೇಸರದಿಂದ ಹೋಗಿ ಮಲಗಿದ. ಆಗಾಗ ಮನೆಯ ಹೊರಗಡೆ ಬಂದು cup cake ಎಂದು ಕರೆಯುತ್ತಲೇ ಇದ್ದ.
ಎಲ್ಲಿಯೂ ಕಪ್ ಕೇಕ್ ನ ಸುಳಿವಿಲ್ಲ, ಆಸೆ ಬಿಟ್ಟಿದ್ದ.
ಎಲ್ಲೋ ತಪ್ಪಿಸಿಕೊಂಡು ಹೋಗಿರ ಬಹುದೆಂದು. ಇಲ್ಲಾ ನಾಯಿಗಳ ಬಾಯಿಗೆ ಸಿಕ್ಕಿರಲೂಬಹುದೆಂದು ಕೊಂಡಿದ್ದ.
ಮತ್ತೆ ಸಂಜೆಯಾಗುತ್ತ ಬಂತು....
ಸಂಜೆ ಏಳು ಗಂಟೆಯ ಸಮಯಕ್ಕೆ ಮತ್ತೆ ಪಾರ್ಕಿಂಗ್ ನಲ್ಲಿ ಮ್ಯಾವ ಮ್ಯಾವ ಎನ್ನುವ ಸ್ವರ ಕೇಳಿ ಬಂತು. ಆಗ ಮತ್ತೆ ಕೆಳಗಡೆ ಹೋಗಿ ಕರೆದಾಗ cup cake ಬಂದಿತು, ಹೊಟ್ಟೆ ಸಹ ಹಸಿದಿತ್ತು, ಪುಟ್ಟ ಪಂಜರ ತಂದು ಒಳಗೆ ಸೇರಿಸಿ ಸಂತಸದಲಿ ಮನೆಗೆ ಕರೆದೊಯ್ದ.
✍️✍️ ಭಾಗ್ಯಶ್ರೀ ಕೆಕ್ಕಾರ
೧೧/೦೯/೨೦೨೪