ನಿಸರ್ಗದ ಚೆಲುವು

ಪ್ರಥ್ವಿಯಲಿದೆ ಸುಂದರ ಚಿತ್ತಾರ
ಕೈಚಳಕ ಗೊಳಗಾಗದ ಅಲಂಕಾರ  
ಮುಂಜಾನೆ ದಿನಕರನ ಆಗಮನ
ಮಬ್ಬಿನ ಮನಕೆಂದೂ ಹೊಸತನ

 ಭುವಿಯಲಿ ಹರಿಯುವ  ನದಿಗಳು  
 ಝುಳು ಝುಳು ಶಭ್ದದ ನಾದಗಳು 
 ಕಣ್ಮನ ಸೂರೆಗೊಳ್ಳುವ ಅಲಂಕಾರ 
 ನಿಸರ್ಗದ ಮಡಿಲಲಿಲ್ಲದ ಅಹಂಕಾರ

ಭೂಮಿಯಲಿದೆ  ಬಣ್ಣ ಬಣ್ಣದ ಚಿಟ್ಟೆ 
ಕೆಲವೆ ಕ್ಷಣದಲಿ ಮನವ ಗೆದ್ದು ಬಿಟ್ಟೆ
ಚೆಂದ ಚೆಂದದ ಬಣ್ಣವ‌  ಹೊಂದಿದ್ದೆ
 ಹೂವಿಂದ ಹೂವಿಗೆ ಹಾರುತಲಿದ್ದೆ

ಕಾಡಿನಲೂ ಅರಳುವ  ಸುಮಗಳು 
‌ಯಾರೂ ಮಾಡದ ಅಲಂಕಾರಗಳು
ಧರಣಿಯಲಿದೆ ತರ ತರದ ವೈಶಿಷ್ಟ್ಯ 
ನೋಡುವ ಜನ್ಮವು ಪಾವನವಷ್ಟೇ 


✍️ ಭಾಗ್ಯಶ್ರೀ ಕೆಕ್ಕಾರ
      ೧೩/೦೯/೨೦೨೪















Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)