ಕಂದಮ್ಮ ನಗುತಿರಲಿ
ಕಂದಮ್ಮ ನಗುವಾಗ ಕಾಮನ ಬಿಲ್ಲರಳಿ
ಮಲ್ಲಿಗೆ ಹೂವು ಬಿರಿದಾವೆ
ಮುದ್ದು ಕಂದಮ್ಮನ ತೊದಲು ಮಾತುಗಳು
ಪಟ ಪಟ ಹರಿದು ಬಂದಾವೆ
ಮುದ್ದು ಮಾತುಗಳು ಕೇಳಲು ಚೆಂದ
ನಕ್ಷತ್ರ ತೋರುವ ಪರಿಯದು ಅಂದ
ಚಂದ ಮಾಮನ ತೋರಿದ ಊಟವು
ಹೊಟ್ಟೆ ತುಂಬಲು ತಣ್ಣನೆ ನಿದ್ದೆಯು
ಕಂದಮ್ಮಗೆ ತೈಲವ ಹಚ್ಚಿ ತಿಕ್ಕುವ ಕೈಗಳು
ಬೆಚ್ಚನೆ ನೀರನ್ನ ಎರೆದು ಮಲಗಿಸಲು
ಅಮ್ಮನ ಮನೆಗೆಲಸ ಜೋರಾಗಿ ಸಾಗಲು
ಕಂದಮ್ಮ ಕಿಲ ಕಿಲ ನಗುತ ಎದ್ದೇಳಲು
ಕಂದಮ್ಮ ಒಳ ಹೊರಗ ನಡೆದಾಡಿ ನಲಿಯಲು
ಸಂತಸದ ಕಡಲು ಮನೆಯೋಳಗ
ಕೂಸು ಕಂದಮ್ಮ ನಗುತಿರಲೆಂದೂ
ಬೇಸರದ ಗಾಳಿ ಸುಳಿಯದಿರಲೆಂದೂ
ಮನೆ ದೇವರಿಗೆ ಹರಕೆ ಹೊತ್ತಾರ.
ಭಾಗ್ಯಶ್ರೀ ಕೆಕ್ಕಾರ
೨೧/೧೦/೨೦೨೪