Posts

ಪ್ರೀತಿ

ಪ್ರತಿದಿನ ಪ್ರತಿಕ್ಷಣ ನಿನ್ನ  ಮಾತುಗಳೇ ಎನಗೆ ಒಳಗೊಳಗೆ ತುಂಬಿರುವ  ಪ್ರೀತಿಯ ಬೆಸುಗೆ  ನಿನ್ನಿಂದ ಒರಟಾದ ಮಾತುಗಳು ಬಂದರೂ  ಬೇಸರಿಸದಲೆ ಬರುವೆನು ತಿರುಗಿ ನಿನ್ನೆಡೆಗೆ... ನಾ ಬರೆದಿದ್ದು ಹೀಗೆ....

ಆಸೆಗಳಿಗೆ ಮಿತಿಯಿಲ್ಲ.

ಅತಿಯಾದ ಆಸೆಗಳಿಂದ ನಿರಾಸೆಯದು ಖಚಿತವು  ಹಿತ-ಮಿತದ ಆಸೆಗಳಿಂದ ಹಿತವಾಗುವ ಮನವು ಮೂರು ದಿನದ ಬಾಳಿನಲಿ ಇರುವುದನು ನೆನೆದು  ಸಂತಸದಲೆ ನಡೆದು ಬಿಡು ಈ ಜಗವ ತೊರೆದು. ನಿನ್ನೆ ಒಂದು ಬಳಗದಲ್ಲಿ ಬರೆದ #ಭಾಗ್ಯೋದಯ

ನೆನಪು

Image

ಕಂದಮ್ಮ ನಗುತಿರಲಿ

ಕಂದಮ್ಮ ನಗುವಾಗ ಕಾಮನ ಬಿಲ್ಲರಳಿ  ಮಲ್ಲಿಗೆ ಹೂವು ಬಿರಿದಾವೆ ಮುದ್ದು ಕಂದಮ್ಮನ ತೊದಲು ಮಾತುಗಳು  ಪಟ ಪಟ ಹರಿದು ಬಂದಾವೆ ಮುದ್ದು ಮಾತುಗಳು ಕೇಳಲು ಚೆಂದ  ನಕ್ಷತ್ರ ತೋರುವ ಪರಿಯದು ಅಂದ ಚಂದ ಮಾಮನ ತೋರಿದ ಊಟವು ಹೊಟ್ಟೆ ತುಂಬಲು ತಣ್ಣನೆ ನಿದ್ದೆಯು ಕಂದಮ್ಮಗೆ ತೈಲವ ಹಚ್ಚಿ ತಿಕ್ಕುವ ಕೈಗಳು ಬೆಚ್ಚನೆ ನೀರನ್ನ ಎರೆದು ಮಲಗಿಸಲು ಅಮ್ಮನ ಮನೆಗೆಲಸ ಜೋರಾಗಿ ಸಾಗಲು ಕಂದಮ್ಮ ಕಿಲ ಕಿಲ ನಗುತ ಎದ್ದೇಳಲು ಕಂದಮ್ಮ ಒಳ ಹೊರಗ ನಡೆದಾಡಿ ನಲಿಯಲು ಸಂತಸದ ಕಡಲು ಮನೆಯೋಳಗ ಕೂಸು ಕಂದಮ್ಮ ನಗುತಿರಲೆಂದೂ ಬೇಸರದ ಗಾಳಿ  ಸುಳಿಯದಿರಲೆಂದೂ ಮನೆ ದೇವರಿಗೆ ಹರಕೆ ಹೊತ್ತಾರ. ಭಾಗ್ಯಶ್ರೀ ಕೆಕ್ಕಾರ  ೨೧/೧೦/೨೦೨೪

ತವರು

ಹೆಣ್ಣಿಗೊಂದು ತವರಿರಲೆ ಬೇಕು  ಆಗಾಗ ಹೋಗಿ ಸಂಭ್ರಮಿಸಬೇಕು ! ಹೊಂಗೆಯ ನೆರಳಂತೆ ತಂಪಿರಬೇಕು ಮನಕೆ ಹಿತವನು ತರುತಲಿರಬೇಕು  ಮನದ ವೇದನೆಯ ಕಳೆಯಬೇಕು  ತವರ ಮನೆಯ ಮಾತುಗಳು ಬೇಕು ಯಾತನೆಗೆ ಸಾಂತ್ವನದ ಮಾತಿರಬೇಕು  ಪ್ರೀತಿ ಮಮತೆ ವಾತ್ಸಲ್ಯ ತುಂಬಿರ ಬೇಕು ಸಿರಿತನವೊ ,ಬಡತನವೋ  ಯಾವುದಿರಲಿ  ಅಮ್ಮನ ಕೈ ರುಚಿಯಿಂದ ಮಾಡಿರುವ ತರ ತರದ ಅಡುಗೆಯ  ಮೃಷ್ಟಾನ್ನವ- ಉಣ್ಣಲು ಹೆಣ್ಣಿಗೊಂದು ತವರು ಬೇಕು ಗುಬ್ಬಿಯು ಗೂಡನ್ನು ಸೇರುವ ತೆರದಿ ಆಗಾಗ ಹೋಗಿ ತವರಲಿ ನಲಿಯ ಬೇಕು  ತವರಿನ ಬಂಧುಗಳ ಜೊತೆ ಸೇರಬೇಕು  ಹೃದಯದ  ಭಾವನೆಗಳ ಇಳಿಸ ಬೇಕು ಇಳಿ ವಯಸ್ಸಿನಲ್ಲೂ ತವರಿನ ನೆನಪು  ಮನದಿ ತರುವುದು ಹೆಣ್ಣಿಗೆ ಹುರುಪು ತವರು ಮನೆಯದು ಹೆಣ್ಣಿಗೆ ಸ್ವರ್ಗವು ನೆನಪಲಿರಿಸಿ ನಿತ್ಯ ಸಾಗುವ ಪಯಣವು ✍️✍️ ಭಾಗ್ಯಶ್ರೀ ಕೆಕ್ಕಾರ  (ಭಾಗೀ ಹೆಗಡೆ ಕಲ್ಲಳ್ಳಿ)

ನಿಸರ್ಗದ ಚೆಲುವು

ಪ್ರಥ್ವಿಯಲಿದೆ ಸುಂದರ ಚಿತ್ತಾರ ಕೈಚಳಕ ಗೊಳಗಾಗದ ಅಲಂಕಾರ   ಮುಂಜಾನೆ ದಿನಕರನ ಆಗಮನ ಮಬ್ಬಿನ ಮನಕೆಂದೂ ಹೊಸತನ  ಭುವಿಯಲಿ ಹರಿಯುವ  ನದಿಗಳು    ಝುಳು ಝುಳು ಶಭ್ದದ ನಾದಗಳು   ಕಣ್ಮನ ಸೂರೆಗೊಳ್ಳುವ ಅಲಂಕಾರ   ನಿಸರ್ಗದ ಮಡಿಲಲಿಲ್ಲದ ಅಹಂಕಾರ ಭೂಮಿಯಲಿದೆ  ಬಣ್ಣ ಬಣ್ಣದ ಚಿಟ್ಟೆ  ಕೆಲವೆ ಕ್ಷಣದಲಿ ಮನವ ಗೆದ್ದು ಬಿಟ್ಟೆ ಚೆಂದ ಚೆಂದದ ಬಣ್ಣವ‌  ಹೊಂದಿದ್ದೆ  ಹೂವಿಂದ ಹೂವಿಗೆ ಹಾರುತಲಿದ್ದೆ ಕಾಡಿನಲೂ ಅರಳುವ  ಸುಮಗಳು  ‌ಯಾರೂ ಮಾಡದ ಅಲಂಕಾರಗಳು ಧರಣಿಯಲಿದೆ ತರ ತರದ ವೈಶಿಷ್ಟ್ಯ  ನೋಡುವ ಜನ್ಮವು ಪಾವನವಷ್ಟೇ  ✍️ ಭಾಗ್ಯಶ್ರೀ ಕೆಕ್ಕಾರ       ೧೩/೦೯/೨೦೨೪

ಬಾಲ್ಯದ ಆಟವೆ ಚೆಂದ

ಬಾಲ್ಯದಲಿ ಗೆಳತಿಯರ ಜೊತೆ  ಜೋಕಾಲಿಯಲಿ ಜೀಕಲು ಮುಗಿಲು ಮುಟ್ಟುವಂತೆ ಕೇ ಕೇ ಹಾಕಲು ಹರ್ಷೋದ್ಗಾರ  ಅಂದಿನ ಬಾಲ್ಯದ ಮರಕೋತಿ  ಕುಂಟೆ ಬಿಲ್ಲೆ , ಕಣ್ಣಾ ಮುಚ್ಚಾಲೆ  ಆಟದ ಆನಂದ  ಇಂದೆಲ್ಲ ಆ ನೆನಪೆ  ಚೆಂದ  ಪುಟಾಣಿ ಮಕ್ಕಳ ತೊದಲು  ಮಾತುಗಳು ಚೆಂದ  ಕಾಲಿನ ಗೆಜ್ಜೆಯ ಘಲ್ ಘಲ್  ನಾದವು ಅಂದ ಅಂದೆಲ್ಲ ತೆಂಗಿನ ಗರಿಗಳ ಆಟಿಕೆಗಳೇ  ಶೃಂಗಾರ  ಪೇಪರಿನಲಿ ಮಾಡುವ  ದೋಣಿಗಳೆ ಅಲಂಕಾರ  ಶಾಲೆಯಲಿ ನಡೆದ ಪರೀಕ್ಷೆಯಲಿ ಮೊದಲ ಶ್ರೇಣಿಯಲಿ ಪಾಸಾದರೆಂದರೆ  ಅಂದೆನೋ ಮನದಲಿ ಆನಂದದ ಸಾಗರ ✍️ ಭಾಗ್ಯಶ್ರೀ ಕೆಕ್ಕಾರ  ೧೩/೦೯/೨೦೨೪